ಪೂರ್ವದಲ್ಲಿ ದಟ್ಟ ಕಾನನದ ಕವಚತೊಟ್ಟ ಸಿಂಹ ಗಾಂಭಿರ್ಯದ ಮಲಯ ಪರ್ವತ... ಪಶ್ಚಿಮದಲ್ಲಿ ನೀಲ್ಗಡಲ ಅಗಾಧ ಜಲರಾಶಿ.. ಇವೆರಡರ ನಡುವೆ ಭೂರಮೆಯ ನೆತ್ತಿಗಿಟ್ಟ ಸಿಂಧೂರದಂತೆ ಶೋಭಿಪ ಶ್ರೀಕ್ಷೇತ್ರ ಹಿರಿಯಡ್ಕ. ಇಲ್ಲಿದ್ದಾರೆ ಭಕ್ತರ ಅಭೀಷ್ಟ ಸಿದ್ಧಿಪ್ರದಾಯಕರಾದ ಶ್ರೀ ಬ್ರಹ್ಮಲಿಂಗೇಶ್ವರ ದೇವರು, ಸಾವಿರ ರುದ್ರಗಣಗಳ ಹಿಂಡಿನೊಡೆಯ ಶ್ರೀ ವೀರಭದ್ರ ಸ್ವಾಮಿ. ತೌಳವ ಪರಂಪರೆಯ ಕೀರ್ತಿಕಳಸಗಳಾದ ಅಬ್ಬಗ ದಾರಗ ಸಿರಿ ಕುಮಾರರು...
ಇದು ಕಾಷ್ಠದಲ್ಲೇ ಅರಳಿದ ಭೂಕೈಲಾಸ .. ಇಲ್ಲಿ ಸಾಕಾರಗೊಂಡಿದೆ ಪರಶಿವನ ನಾಟ್ಯವಿಲಾಸ...