Email: svtemplehiriadka@gmail.com | Call: 0820-2542605, +91 9481440240
2018
April
25

ಕರ್ನಾಟದಲ್ಲೇ ಮಾದರಿ ಜೀರ್ಣೋದ್ದಾರ: ಶ್ರೀ ಕ್ಷೇತ್ರ ಹಿರಿಯಡ್ಕದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ 10ನೇ ಹಾಗೂ ಮುಕ್ತಾಯದ ದಿನದಂದು ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಆಶೀರ್ವಚನದಲ್ಲಿ ದೇವಳದ ಪ್ರತಿಯೊಂದು ನಿರ್ಮಾಣವು ಹಿರಿಯಡ್ಕದ ಹಿರಿಮೆಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಸಂಪೂರ್ಣ ಬೆಳ್ಳಿಯ ಕವಚದೊಂದಿಗೆ ಗರ್ಭಗುಡಿ, ದಾರು ಶಿಲ್ಪಿ ಶೃಂಗಾರದ ಬ್ರಹ್ಮಲಿಂಗೇಶ್ವವರ ಗುಡಿ, ಅತ್ಯಂತ ಎತ್ತರದ ಧ್ವಜ ಸ್ತಂಭ ಮತ್ತು ಬೃಹದಾಕಾರದ ರಾಜಗೋಪುರ ಇವುಗಳ ನಿರ್ಮಾಣವನ್ನುಮುಕ್ತಕಂಠದಿಂದ ಶ್ಲಾಘಿಸಿದರು.

ಶ್ರೀ ದೇವಳದ ಜೀರ್ಣೋದ್ದಾರದ ಕನ್ಸಲ್ಟಿಂಗ್ ಇಂಜಿನಿಯರ್ ಕುತ್ಯಾರ್ ಪ್ರಸಾದ್ ಶೆಟ್ಟಿ, ಶಿಲ್ಪಿ ರಾಜು ಎಚ್ ನಾಯ್ಕ್ ಮುರುಡೇಶ್ವರ, ಕಾಷ್ಠಶಿಲ್ಪಿಗಳಾದ ನಾರಾಯಣ ಆಚಾರ್ಯ ಮತ್ತು ಹರೀಶ್ ಆಚಾರ್ಯ ಕಲ್ಲ ಮುಂಡ್ಕುರ್, ಸೈಟ್ ಇಂಜಿನಿಯರ್ ಅಂಜಾರ್ ಹರೀಶ್ ಶೆಟ್ಟಿ ಇವರುಗಳನ್ನು ಗೌರವಿಸಲಾಯಿತು.


2018
April
22

ಸಾಂಸ್ಕೃತಿಕ ಕಾರ್ಯಕ್ರಮಗಳು

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಧರ್ಮ ಸಭೆ ನಡೆಯಿತು. ಶ್ರೀ ಬ್ರಹ್ಮಶ್ರೀ ಉಚ್ಚಿಲತ್ತಾಯ ನಿಲೇಶ್ವರ ಪದ್ಮನಾಭ ತಂತಿಗಳು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಳಲು ವಾದನ - ಪಂ. ಪ್ರವೀಣ್ ಗೋಡ್ಕಿಂಡಿ ಮತ್ತು ಬಳಗ, ಬೆಂಗಳೂರು

ನೃತ್ಯ ಸಿಂಚನ - ಸನಾತನ ನಾಟ್ಯಾಲಯ ಮಂಗಳೂರು, ನೃತ್ಯ ನಿಕೇತನ ಕೊಡವೂರು, ವಸಂತ ನಾಟ್ಯಾಲಯ ಕುಂದಾಪುರ.


2018
April
22

ಧಾರ್ಮಿಕ ಕಾರ್ಯಕ್ರಮಗಳು

ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಹಿರಿಯಡ್ಕ ಬ್ರಹ್ಮಕಲಶೋತ್ಸವ ಸಂದರ್ಭ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಮತ್ತು ಶ್ರೀ ವೀರಭದ್ರ ದೇವರಿಗೆ ಬ್ರಹ್ಮ ಕಲಶಾಭಿಷೇಕ ನೆರೆವೇರಿತು

ಸಾರ್ವಜನಿಕ ಅನ್ನ ಸಂತರ್ಪಣೆ ಪ್ರಯುಕ್ತ ಪಲ್ಲ ಪೂಜೆ ನೆರೆವೇರಿತು ಸುಮಾರು 40000 ಕ್ಕೂ ಹೆಚ್ಚು ಭಕ್ತಾಧಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು.


2018
April
21

ರಾಜಧರ್ಮ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ಆಶೀರ್ವಚನ: ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು, ಶ್ರೀ ಪೇಜಾವರ ಮಠ, ಉಡುಪಿ.

ಸಭಾಧ್ಯಕ್ಷತೆ: ಶ್ರೀ ಎನ್. ವಿನಯ್ ಹೆಗ್ಡೆ, ಕುಲಪತಿಗಳು, ನಿಟ್ಟೆ ವಿಶ್ವವಿದ್ಯಾಲಯ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ - ಪಂ. ಫಯಾಜ್ ಖಾನ್ ಮತ್ತು ಬಳಗ, ಬೆಂಗಳೂರು.

ನೃತ್ಯ ವೈವಿಧ್ಯ - ಹೆಜ್ಜೆನಾದ ತಂಡ ಮಂಗಳೂರು ಮತ್ತು ಭಾರ್ಗವಿ ತಂಡ ಉಡುಪಿ


2018
April
20

ಸಾಂಸ್ಕೃತಿಕ ಕಾರ್ಯಕ್ರಮಗಳು

ದ್ವಂದ್ವ ಪಿಟೀಲು ವಾದನ
ಮೈಸೂರು ಮಂಜುನಾಥ್ ಮತ್ತು ನಾಗರಾಜ್ ಸಹೋದರರಿಂದ.

ಸಂಗೀತ ರಸಸಂಜೆ
ವಿವಿಧ ಟಿವಿ ರಿಯಾಲಿಟಿ ಶೋಗಳಲ್ಲಿ ವಿಜೇತರಾದ ಬಾಲ ಪ್ರತಿಭೆಗಳಿಂದ


2018
April
20

ಸಂತ ಸಂಗಮ

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂತ ಸಂಗಮ ನಡೆಯಿತು. ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಶ್ರೀ ಶ್ರೀ ಕಾಳಹಸ್ತೆಂದ್ರ ಸ್ವಾಮೀಜಿ, ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತರಿದ್ದರು.


2018
April
18

ಸಾಂಸ್ಕೃತಿಕ ಕಾರ್ಯಕ್ರಮಗಳು

ಅಂಬಯ್ಯನುಲಿ ಮತ್ತು ಬಳಗ, ರಾಯಚೂರು ಇವರಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ಸ್ವರ್ ನಿನಾದ್ ಕೊಲ್ಲಾಪುರ್, ಮಹಾರಾಷ್ಟ್ರ ಇವರು ದೇಶಭಕ್ತಿ ಸಾರುವ ಜಾಗೋ ಹಿಂದೂಸ್ಥಾನಿ ಕಾರ್ಯಕ್ರಮ ನಡೆಸಿಕೊಟ್ಟರು


2018
April
17

ಸಾಂಸ್ಕೃತಿಕ ಕಾರ್ಯಕ್ರಮಗಳು

ಪಂ. ಜಯತೀರ್ಥ ಮೇವುಂಡಿಯವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಪಂ. ಜಯತೀರ್ಥ ಮೇವುಂಡಿ ಮತ್ತು ಬಳಗ, ಹುಬ್ಬಳ್ಳಿ

Madhulita Mahapatro ಒಡಿಸ್ಸಿ ನೃತ್ಯ ಮಧುಲಿತಾ ಮಹಾಪಾತ್ರೋ ಮತ್ತು ಬಳಗ, ಬೆಂಗಳೂರು

Shivankam ಭರತನಾಟ್ಯ ಶಿವಾಂಕಂ ಬೆಂಗಳೂರು


2018
April
17

ಧಾರ್ಮಿಕ ಕಾರ್ಯಕ್ರಮಗಳು

ಬ್ರಹ್ಮಕಲಾಶಾಭಿಷೇಕ ಪ್ರಯುಕ್ತ ಎಪ್ರಿಲ್ 17ರಂದು ಧಾರ್ಮಿಕ ಕಾರ್ಯಕ್ರಮಗಳಾದ ಸಹಸ್ರ ನಾಳಿಕೇರ ಗಣಯಾಗ, ತಟಾಕ ಶಾಂತಿ, ಚತುರ್ವೇದ ಪಾರಾಯಣ ನಡೆಯಿತು. ನೂರಾರು ಭಕ್ತರು ಈ ದೇವತಾ ಕಾರ್ಯದಲ್ಲಿ ಭಾಗಿಯಾಗಿಯಾದರು.


2018
April
16

ಹಸಿರು ಹೊರೆಕಾಣಿಕೆ

ಶ್ರೀ ಕ್ಷೇತ್ರ ಹಿರಿಯಡಕ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆಗೆ ಎಪ್ರಿಲ್ ೧೬ರಂದು ಅಭೂತಪೂರ್ವವಾಗಿ ಸಾಗಿಬಂತು.

ಹಸಿರುವಾಣಿ, ದಿನಸಿ ಸಾಮಗ್ರಿಗಳು ಹಾಗು ಸಾಂಸ್ಕೃತಿಕ ತಂಡಗಳು ಹಾಗೂ ಸಾವಿರಾರು ಭಕ್ತರ ದಂಡು ಹಿರಿಯಡ್ಕದ ಹಿರಿಮೆಗೆ ಸಾಕ್ಷಿಯಾಯಿತು.


2018
April
1

ಚಪ್ಪರ ಮುಹೂರ್ತ

ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರದೊಂದಿಗೆ ಏಪ್ರಿಲ್ 16 ರಿಂದ 25 ರ ಪರ್ಯಂತ ನಡೆಯಲಿರುವ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಚಪ್ಪರ ಮುಹೂರ್ತ ನೆರೆವೇರಿಸಲಾಯಿತು.

ದೇವಳದ ತಂತ್ರಿ ಷಡಂಗ ಲಕ್ಷ್ಮೀನಾರಾಯಣ ತಂತ್ರಿಯವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ನೆರೆದ ಭಕ್ತ ಸಮೂಹ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನಡೆಯಿತು. ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಗೋವರ್ಧನದಾಸ್ ಹೆಗ್ಡೆಯವರು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು. ಅಧ್ಯಕ್ಷರುಗಳಾದ ಅಂಜಾರು ಬೀಡು ಶ್ರೀ ಸುಭಾಶ್ಚಂದ್ರ ಹೆಗ್ಡೆ, ಪಡ್ದಮ್ ಬೀಡು ಶ್ರೀ ಹರ್ಷವರ್ಧನ ಹೆಗ್ಡೆ, ಅರ್ಚಕ ರಂಗನಾಥ ಭಟ್ ಸಿಬ್ಬಂದಿ ವರ್ಗ, ಇತರ ಜೀರ್ಣೋದ್ದಾರ ಸಮಿತಿ ಸದಸ್ಯರುಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.


2018
March
22

ಆಮಂತ್ರಣ ಪತ್ರಿಕೆ ಬಿಡುಗಡೆ

ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಹಿರಿಯಡಕ ಇಲ್ಲಿನ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಇಂದು ಜರುಗಿತು.

ಶ್ರೀ ಕ್ಷೇತ್ರದ ಹಿರಿಯರುಗಳಾದ ಸರ್ವೋತ್ತಮ ಪೈ, ರಾಘವೇಂದ್ರ ಮಲ್ಪೆ, ಸದಾಶಿವ ಆಚಾರ್ ಮಾನೈ, ಜಯರಾಮ ಶೆಟ್ಟಿ ಕೊಂಡಾಡಿ, ವಿಠಲ ಶೇರಿಗಾರ್ ಹಿರಿಯಡ್ಕ, ಭೋಜ ಎಸ ನಾಯಕ್, ಸುಬ್ರಾಯ ನಾಯಕ್, ಧರ್ಮ ಪ್ರಕಾಶ್ ಹಿರಿಯಡ್ಕ, ಉದಯ ಬಂಗೇರ ಬಜೆ ಇವರುಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು.


2018
february
22

ಧ್ವಜ ಮತ್ತು ಸ್ಟಿಕ್ಕರ್ ಬಿಡುಗಡೆ

ಜಾನಪದ ವಿದ್ವಾಂಸರಾದ ಶ್ರೀ ಕೆ. ಎಲ್. ಕುಂಡಂತಾಯ ಇವರು ಸಂಕಲ್ಪ ಶುದ್ಧಿಯಿಂದ ಸಂಕಲ್ಪ ಸಿದ್ದಿಸಾಧ್ಯ, ಹಿರಿಯಡಕ ಕ್ಷೇತ್ರದಲ್ಲಿ ನಮ್ಮ ತುಳುನಾಡ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಲು ಸಾಕಷ್ಟು ವಿಷಯ ಹಾಗು ಅವಕಾಶಗಳಿವೆ. ಹಲವು ಶತಮಾನಗಳ ಇತಿಹಾಸವಿರುವ ಈ ಕ್ಷೇತ್ರ ಆಲಡೆಗಳಲ್ಲಿಯೇ ವಿಶೇಷ ಸ್ಥಾನವನ್ನು ಹೊಂದಿದೆ ಎಂದರು.. ಇನ್ನು ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳಲು ಸಂಕಲ್ಪದ ಅವಶ್ಯಕತೆಯನ್ನು ವಿವರವಾಗಿ ತಿಳುಹಿಸಿದರು.

ಶ್ರೀಯುತರು ಹಿರಿಯಡಕದ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಳದ ಕಾರ್ಯವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಮನೆಗಳಲ್ಲಿ ಫೆ 25 ರಿಂದ 48 ದಿವಸ ಅಂದರೆ ಏಪ್ರಿಲ್ 16 ರಿಂದ 25 ನ ಶ್ರೀ ದೇವಳದ ಬ್ರಹ್ಮಕಲಶೋತ್ಸವದವರೆಗೆ, ಬ್ರಹ್ಮಕಲಶೋತ್ಸವದ ವೃತಾಚರಣೆ ಸಂಕಲ್ಪಕ್ಕೆ ಚಾಲನೆ ನೀಡುವ ಸಲುವಾಗಿ ಧ್ವಜ ಮತ್ತು ಸ್ಟಿಕ್ಕರ್ ಬಿಡುಗಡೆಗೊಳಿಸುತ್ತ ನೇರದ ಭಕ್ತರಿಗೆ ಸಂದೇಶವನ್ನು ನೀಡುತ್ತಾ ಮಾತನಾಡುತ್ತಿದ್ದರು.


2017
december
4

ಕರಸೇವೆ

ಹಿರಿಯಡ್ಕ ವೀರಭದ್ರಸ್ವಾಮಿ ದೇವಸ್ಥಾನದ ಕರಸೇವೆಯಲ್ಲಿ ಪಾಲ್ಗೊಂಡ ಜನಸಾಗರ

ತಾ.04-12-2017 ರಿಂದ ಪ್ರಾರಂಭವಾದ ದೇವಸ್ಥಾನದ ಕರಸೇವೆಯಲ್ಲಿ ಪ್ರತಿದಿನ ಹಿರಿಯಡ್ಕ ಸುತ್ತಮುತ್ತಲಿನ ಕರೆಗಳಿಂದ ರಾತ್ರಿ ಹಗಲು ಕರಸೇವೆ ನಡೆಯುತ್ತಿದ್ದು ಇಂದು ಬೊಮ್ಮರಬೆಟ್ಟು ವಾರ್ಡ್ 1, ಅಂಜರು ವಾರ್ಡ್ 1, ಅತ್ರಾಡಿ ವಾರ್ಡ್ ಹಾಗು ಸ್ಥಳೀಯ ಭಕ್ತಾದಿಗಳು ಸುಮಾರು 700ಕ್ಕೂಸೇರಿ ಮಿಕ್ಕಿಇಂದು ಕರಸೇವೆಯಲ್ಲಿ ಪಾಲ್ಗೊಂಡರು